ಎದುರುಮನೆ ಲಕ್ಷ್ಮೀ ಬಾರಮ್ಮ
ಎದುರುಮನೆ ಲಕ್ಷ್ಮೀ ಬಾರಮ್ಮ, ನನ್ನೊಲವಿನ ವೇಣೀ
ನೀ ಎದುರುಮನೆ ಲಕ್ಷ್ಮೀ ಬಾರಮ್ಮಾ ||ಪ||
ಜೀನ್ಸು ಪ್ಯಾಂಟನು ಹಾಕ್ಕೊಂಡು ಬಾರೆ
ಗುಲಾಬಿ ಹೂವನು ಮುಡುಕಂಡು ಬಾರೆ
ಕಾಲೇಜ್ ಹುಡುಗರು ಲೈನು ಹೊಡೆದರೇss
ಕಾಲಲ್ಲಿರುವಾ ಚಪ್ಪಲಿ ತೋರೇ ||ಪ||
ಬೆಂಕಿಪೊಟ್ಟಣ ಕೇಳುತ ಬಾರೆ
ಹಾಲಿಗೆ ಹೆಪ್ಪನು ಒಯ್ಯಲು ಬಾರೆ
ಶುಕ್ರವಾರದಾ ಸಂಜೆಯವೇಳೆಗೆ
ಚಿತ್ರಮಂಜರೀ ನೋಡಲು ಬಾರೇ ||ಪ||
ಚಕ್ಕುಲಿ ಕೋಡ್ಬಳೆ ತಿನ್ನೋಣ ಬಾರೆ
ಇವತ್ತಿನ್ ಪೇಪರ್ ಓದೋಣ ಬಾರೆ
ಅಪ್ಪ-ಅಮ್ಮ ಇಬ್ಬರೂ ಇಲ್ಲ
ನಾವಿಬ್ರೇ ಕೂತು ಹರಟೋಣ ಬಾರೇ ||ಪ||
No comments:
Post a Comment