ಶುಭರಾತ್ರಿ ಗೆಳತಿ
ಸಂಜೆಯಾಗಸದ ಮೋಡದಂಚಿನಲಿ
ದೂರದಿಗಂತದಿ ಗೋಚರಿಸುವ ನಕ್ಷತ್ರ
ಸಮೂಹದಲಿ ನಿಂತು ಹೇಳುವೆ ನಿನಗೆ
ಶುಭರಾತ್ರಿ - ಗೆಳತಿ
ಹುಣ್ಣಿಮಯ ದಿನದಂದು ತಿಂಗಳ ಬೆಳಕಿನಲಿ
ಭ್ರಮರವಾಗಿ ಝೇಂಕರಿಸುತ್ತಾ ಬಂದು
ನಿನ್ನ ಮುಂಗುರುಳತಾಗಿ ಗುಟ್ಟಾಗಿ ಹೇಳುವೆ
ಶುಭರಾತ್ರಿ - ಗೆಳತಿ
ಬೀಸು ತಂಗಾಳಿಯಜೊತೆ ಮಲ್ಲಿಗೆ
ಹೂವಿನ ಕಂಪಾಗಿ ತೇಲಿಬಂದು ನಿನ್ನ
ಸುವಾಸನೆಯಲಿ ಮೈಮರೆಸಿ ಹೇಳುವೆ ನಿನಗೆ
ಶುಭರಾತ್ರಿ - ಗೆಳತಿ
ಕಡಲತಡಿಯಲಿ ಬಡಿವ ಅಲೆಗಳ
ಜೊತೆ ಮುತ್ತಾಗಿ ತೇಲಿಬಂದು
ನಿನ್ನಂಗಾಲಿಗೆ ತಾಗಿ ಹೇಳುವೆನಿದೋ
ಶುಭರಾತ್ರಿ - ಗೆಳತಿ
ಅಂದ ಕಿರುನಗೆಬೀರೆ ಚೆಂದದಾ ನಿನ್ನಂ
ದವ ಸವಿದು ಪಿಸುಮಾತಿನಲಿ ನಿನಗೆ
ಸುಖ ನಿದ್ರೆಗುಮುನ್ನ ಮತ್ತೊಮ್ಮೆ ಇದೋ
ಶುಭರಾತ್ರಿ - ಗೆಳತಿ
No comments:
Post a Comment